ಭಾರತೀಯ ಸನಾತನ ಧರ್ಮಗಳಲ್ಲಿ ವೀರಶೈವಧರ್ಮವು ಒಂದು ಪ್ರಮುಖವಾದುದಾಗಿದೆ. ಈ ಧರ್ಮಕ್ಕೆ ಯುಗಯುಗಗಳ ಪರಂಪರೆಯಿದೆ. ಸಮಸ್ತ ಮನುಕುಲದ ಕಲ್ಯಾಣಕ್ಕಾಗಿ ಶ್ರೀ ಜಗದ್ಗುರು ಪಂಚಾಚಾರ್ಯರು ಸನಾತನ ಕಾಲದಿಂದ ಪ್ರತೀ ಯುಗದಲ್ಲಿಯೂ ಅವತರಿಸಿ ಬಂದು ಜಾತಿ, ಮತ, ಕುಲ, ಆಶ್ರಮ ವ್ಯವಸ್ಥೆಯ ವೈಷಮ್ಯದಿಂದ ಬಳಲಿಹೋಗಿದ್ದ ಸಮಾಜದಲ್ಲಿ, ವರ್ಣ ವ್ಯವಸ್ಥೆಯನ್ನು ಮೀರಿದ ಮಾನವ ಧರ್ಮವನ್ನು ಸ್ಥಾಪಿಸುವುದರ ಮೂಲಕ ಭಗವಂತನು ಸರ್ವರಿಗೂ ಸ್ವಾಭಾವಿಕವಾಗಿ ಕರುಣಿಸಿರುವ ಗೌರವ ಮತ್ತು ಸಮಾನತೆಯನ್ನು ಕಾಲದಿಂದ ಕಾಲಕ್ಕೆ ಮರುಪ್ರತಿಷ್ಠಾಪಿಸಿದರು.ಶ್ರೀ ಜಗದ್ಗುರು ಪಂಚಾಚಾರ್ಯರು ದೇಶದಾದ್ಯಂತ …